ಭಾರತೀಯ ಅಂಚೆ (India Post) ಇಲಾಖೆ ನೇಮಕಾತಿ
India Post Recruitment – 2026
ಸರ್ಕಾರಿ ಹುದ್ದೆಯ ಮೌಲ್ಯವು, ಬಂಗಾರದ ಬೆಲೆ ಏರಿದಂತೆ ಹೆಚ್ಚುತ್ತಿರುವ ಈ ಹೊತ್ತಿನಲ್ಲಿ. ಎ.ಐ ತಂತ್ರಜ್ಞಾನ ಖಾಸಗಿ ಕಂನಿಗಳಲ್ಲಿ ದುಡಿಯುತ್ತಿರುವ ನೌಕರರ ಕೆಲಸವನ್ನು ಕಸಿದುಕೊಳ್ಳುತ್ತಿರುವ ಈ ಹೊತ್ತಿನಲ್ಲಿ. ನನಗೊಂದು ಸರ್ಕಾರಿ ನೌಕರಿ ಬೇಕು ಎಂದು ಆಸೆ ಪಡುತ್ತಿರುವ ಇಂದಿನ ಯುವಕ ಯುವತಿಯರೇ! ಆ ನೌಕರಿಯಿಂದ ಕಡೇ ಪಕ್ಷ ನಮ್ಮ ಸಂಸಾರ ನೆಮ್ಮದಿಯಿಂದ ಇರುತ್ತದೆ ಎಂದು ತಮಗೆ ತಾವೇ ಸಮಾಧಾನ ಪಡಿಸಿಕೊಳ್ಳುತ್ತಿರುವ ಯುವಕ ಯುವತಿಯರೇ! ನಿಮಗಿದೋ ಒಂದು ಒಳ್ಳೆಯ ಸುವರ್ಣಾವಕಾಶ. “ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ” ಎಂಬ ಸ್ವಾಮಿ ವಿವೇಕಾನಂದರ ನಾಣ್ಣುಡಿಯಂತೆ ನೀವು ಈಗ ಕಾರ್ಯ ಪ್ರವೃತ್ತರಾಗಬೇಕಿದೆ. ಸರ್ಕಾರಿ ನೌಕರಿಯ ಲಾಭ ಏನೆಂದರೆ? ಭಾರತದಂತಹ ಮಧ್ಯಮ ವರ್ಗದವರು ಹೆಚ್ಚಿರುವ ದೇಶದಲ್ಲಿ ಜೀವನ ಮಟ್ಟ ನಿಧಾನಗತಿಯಲ್ಲಿ ಸುಧಾರಿಸಬೇಕಾಗಿರುವ ಅವಶ್ಯಕತೆಯಿದ್ದು, ಅಂತಹ ಎಷ್ಟೋ ಮಧ್ಯಮ ವರ್ಗದ ಮನೆಗಳಿಗೆ, ಸಂಸಾರಗಳಿಗೆ ಸರ್ಕಾರಿ ನೌಕರಿಯು ಆಧಾರಸ್ತಂಭ ಎನ್ನುವುದು ಇಂದಿಗೂ ಪ್ರಸ್ತುತ ನಿತ್ಯ ಸತ್ಯ. ಅದರಲ್ಲೂ ನಾವು ವಿವರಿಸುತ್ತಿರುವ ಸರ್ಕಾರಿ ನೌಕರಿಯು ರಾಜ್ಯ ಸರ್ಕಾರದ್ದಲ್ಲ, ಇದು ಕೇಂದ್ರ ಸರ್ಕಾರದ ಇಲಾಖೆಯಾಗಿದ್ದು ಅದೃಷ್ಟದಲ್ಲಿ ಅದೃಷ್ಟವಂತರಿಗೆ ಮಾತ್ರ ಲಭಿಸುವಂತದ್ದು ಎನ್ನುವುದನ್ನು ಎಂದಿಗೂ ಮರೆಯಬೇಡಿ. ಮೂಲ ವೇತನ ಕಡಿಮೆಯಿರಬಹುದು ಆದರೆ ಭತ್ಯೆಗಳ ರೂಪದಲ್ಲಿನೀಡುವ ಒಟ್ಟಾರೆ ಮಾಸಿಕ ವೇತನವು ಅತ್ಯಂತ ಆಕರ್ಷಕವಾಗಿದೆ.
ನೀವು ಖಾಸಗಿ ವಲಯದಲ್ಲಿ ಹೊಸದಾಗಿ ಕೆಲಸಕ್ಕೆ ಸೇರಿ ಕರ್ತವ್ಯ ನಿರ್ವಹಿಸುತ್ತಿರುವವರನ್ನು ಒಮ್ಮೆ ಸಂಪರ್ಕಿಸಿ ನೋಡಿ ಆಗ ನಿಮಗೇ ತಿಳಿಯುವುದು ಇದರ ಬೆಲೆ ಏನು ಎಂಬುವುದು. ಖಾಸಗಿ ಕಂನಿಗಳಲ್ಲಿ 10ನೇ ತರಗತಿ ಪಾಸ್ ಆದವರಿಗೆ ವೇತನ ಕಡಿಮೆ. ಅದರಲ್ಲೂ ಅನುಭವ ರಹಿತರು ಅತ್ಯಂತ ಕಡಿಮೆ ಸಂಬಳಕ್ಕೆ ಹೆಚ್ಚು ಕಾಲ ಕೆಲಸ ಮಾಡಬೇಕಾಗುತ್ತದೆ. ಒಂದೋ ಎರಡೋ ಡಿಗ್ರಿಗಳನ್ನು ಪಡೆದುಕೊಂಡೇ ಪರಿಸ್ಥಿತಿ ಹೀಗಿರುವಾಗ, ನೀವು ನಿಸ್ಸಂಶಯವಾಗಿ ಸರ್ಕಾರಿ ಕೆಲಸಗಳಿಗೆ ಪೂರ್ವ ತಯಾರಿಯನ್ನು ನಡೆಸಿ, ಪ್ರಯತ್ನಿಸಿ, ತಮ್ಮದಾಗಿಸಿಕೊಳ್ಳಿ. ವಿಫಲವಾದಾಗ ಪ್ರಯತ್ನವನ್ನು ಬಿಡಬೇಡಿ. ಮರಳಿ ಯತ್ನವ ಮಾಡಿ, ಮರಳಿ ಯತ್ನವ ಮಾಡಿ, ಮರಳಿ ಯತ್ನವ ಮಾಡಿ ಸಿದ್ಧಿಸುವುದು. ಯಾರು ಏನೇ ಹೇಳಲಿ ಸರ್ಕಾರಿ ನೌಕರಿ ಎಂದರೆ ಜೀವನಕ್ಕೆ ಒಂದು ಭದ್ರತೆ. ಸಂಸಾರಕ್ಕೆ ಒಂದು ಭದ್ರತೆ. ಕುಟುಂಕ್ಕೆ ಒಂದು ಭದ್ರತೆ. ಮನೆಗೆ ಒಂದು ಭದ್ರತೆ. ಭವಿಷ್ಯದ ಏಳು ಬೀಳುಗಳಿಗೆಲ್ಲಾ ಒಂದು ಭದ್ರತೆ. ನಿಧಾನಗತಿಯ ಏಳಿಗೆಯಾದರೂ ಸಹ ಅದು ಶಾಶ್ವತವಾದದ್ದು. ಕಡಿಮೆ ಸಮಯದಲ್ಲಿ ಹೆಚ್ಚು ಗಳಿಸಲು ಹೋಗಿ ಕೈ ಸುಟ್ಟುಕೊಂಡು ತಮ್ಮ ಜೀವನವನ್ನು ಮತ್ತು ಜೀವವನ್ನೇ ಅಂತ್ಯ ಗೊಳಿಸಿಕೊಂಡವರ ಮುಂದೆ ತಾವು ಮರ್ಯಾದೆಯಿಂದ ತಲೆ ಎತ್ತಿ ನಿಲ್ಲುವಂತೆ ಮಾಡುವುದೇ ಈ ಸರ್ಕಾರಿ ನೌಕರಿ. ಆದರೆ ನಮ್ಮ ಭವ್ಯ ಭಾರತದ ಮುಂದಿನ ಸರ್ಕಾರಿ ಅಧಿಕಾರಿಗಳಾಗುವ ನಿಮ್ಮಲ್ಲಿ ನನ್ನದೊಂದು ಅತ್ಯಂತ ಕಳಕಳಿಯ ಮನವಿ. ಭ್ರಷ್ಟಾಚಾರಿಗಳಾಗಬೇಡಿ, ಬಲ್ಲ ಮೂಲಗಳ ಪ್ರಕಾರ ಹೇಳುವುದಾದರೆ ಸರ್ಕಾರಿ ನೌಕರಿಗೆ ಸೇರುವುದೇ ಭಷ್ಟಾಚಾರ ಮಾಡಲು ಎನ್ನುವಂತಹ ಪರಸ್ಥಿತಿ ನಿರ್ಮಾಣವಾಗಿದೆ. ಪ್ರಾಮಾಣಿಕವಾಗಿ ಕೆಲಸ ಮಾಡುವವರನ್ನು ದಡ್ಡರೆಂದು ಬಿಂಬಿಸುವ, ಭಷ್ಟಾಚಾರಿಗಳನ್ನು ಅತೀ ಬುದ್ದಿವಂತರೆನ್ನುವ, ಅಂತಹ ನೀಚರನ್ನು ಅತ್ಯಂತ ಧೈರ್ಯ ಶಾಲಿಗಳಂತೆ ಬಿಂಬಿಸುವ ಈ ಸಮಾಜದಲ್ಲಿ ನಾವು ಬದುಕುತ್ತಿರುವುದು ಅತ್ಯಂತ ವಿಷಾದಕರ. ಹೇಳಲು ಸಾಕಷ್ಟಿದೆ ಸಮಯ ಬಂದಾಗ ಮುಂದುವರೆಸುವ. ಸಧ್ಯಕ್ಕೆ ನೀವು ಮಾಡಬೇಕಾಗಿರುವ ಕೆಲಸದ ಕಡೆ ಗಮನ ಕೊಡಿ.
ಹೆಮ್ಮೆಯ ಪ್ರಧಾನ ಮಂತ್ರಿಗಳ ಆಶಯದಂತೆ ಭಷ್ಟಾಚಾರ ನಿರ್ಮೂಲನೆಗೆ ಪಣ ತೊಡಿ. ಹಾಗೂ ನಿಮ್ಮ ಗುರಿಯ ಕಡೆ ಗಮನ ಕೊಡಿ.

ಭಾರತೀಯ ಅಂಚೆ (India Post) ಇಲಾಖೆ ನೇಮಕಾತಿ-2026
ಆನ್-ಲೈನ್ ಮುಖಾಂತರಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ವಿವರಗಳಿಗಾಗಿ, ಈ ಕೆಳಕಾಣಿಸಿದ ವೆಬ್ ಸೈಟ್ ನ್ನು ಸಂಪರ್ಕಿಸಿ.
ಭಾರತೀಯ ಅಂಚೆ ಇಲಾಖೆಯಲ್ಲಿ ಬ್ರಾಂಚ್ ಪೋಸ್ಟ್ ಮಾಸ್ಟರ್, ಅಸಿಸ್ಟಂಟ್ ಬ್ರಾಂಚ್ ಪೋಸ್ಟ್ ಮಾಸ್ಟರ್ ಮತ್ತು ಗ್ರಾಮೀಣ ಢಾಕ್ ಸೇವಕ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದ್ದು ಆಸಕ್ತ 10ನೇ ತರಗತಿಯನ್ನು (85% ಗಿಂತ ಹೆಚ್ಚು ಅಂಕಗಳನ್ನು ಪಡೆದು ಪಾಸ್ ಆಗಿರುವವರು ನೇಮಕಾತಿಯಾಗುವ ಸಾಧ್ಯತೆಗಳು ಜಾಸ್ತಿ) ಪಾಸ್ ಆಗಿರುವ ಅಭ್ಯರ್ಥಿಗಳು ಆನ್ ಲೈನ್ ಮುಖಾಂತರ ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ.
- ಅಧಿಸೂಚನೆ ಹೊರಡಿಸುವ ದಿನಾಂಕ: 28-01-2026.
- ಆನ್ ಲೈನ್ ಮುಖಾಂತರ ನೋಂದಣಿ ಮಾಡಿಕೊಳ್ಳಲು ಪ್ರಾರಂಭದ ದಿನಾಂಕ 31-01-2026.
- ಆನ್-ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 05-02-2026.
- ಸಲ್ಲಿಸಿದ ಅರ್ಜಿಯಲ್ಲಿ ಏನಾದರೂ ತಪ್ಪುಗಳಿದ್ದರೆ ಸರಿಪಡಿಸಿಕೊಳ್ಳಲು ನಿಗಧಿಪಡಿಸಿರುವ ದಿನಾಂಕ: 18-02-2026 ಮತ್ತು 19-02-2026.
“ಅಭ್ಯರ್ಥಿಗಳು ನೋಂದಣಿ ಮಾಡಿಕೊಳ್ಳಲು ನಿಮ್ಮದೇ ಆದ ಒಂದು ದೂರವಾಣಿ (ಮೊಬೈಲ್) ಸಂಖ್ಯೆ ಮತ್ತು ಇ-ಮೇಲ್ ಐಡಿ ಯನ್ನು ಹೊಂದಿರಬೇಕಾಗುತ್ತದೆ.”
ಭಾರತ ಸರ್ಕಾರದ ಸಂವಹನ ಸಚಿವಾಲಯದ ಅಡಿಯಲ್ಲಿ ಬರುವ ಅಂಚೆ ಇಲಾಖೆಯ ಬ್ರಾಂಚ್ ಪೋಸ್ಟ್ ಮಾಸ್ಟರ್, ಅಸಿಸ್ಟಂಟ್ ಬ್ರಾಂಚ್ ಪೋಸ್ಟ್ ಮಾಸ್ಟರ್ ಹಾಗೂ ಗ್ರಾಮೀಣ ಢಾಕ್ ಸೇವಕ ಹುದ್ದೆಗಳಿಗೆ ಆನ್-ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ದಿನಾಂಕ 05/02/2026 ರಿಂದ ಅವಕಾಶವನ್ನು ನೀಡಲಾಗಿದ್ದು, ಸದರಿ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳು ಪ್ರಯತ್ನಿಸ ಬಹುದಾಗಿದೆ.
ಸಾಮಾನ್ಯಅರ್ಹತೆಗಳು
- ಕನಿಷ್ಠ 18 ವರ್ಷ ವಯಸ್ಸಾಗಿರಬೇಕು ಮತ್ತು 40 ವರ್ಷ ಮೀರಿರಬಾರದು. ಸರ್ಕಾರ ನಿಗಧಿಪಡಿಸಿದ ನಿಯಮಾನುಸಾರ ವಯೋಮಿತಿಯ ಸಡಿಲಿಕೆ ಇರುತ್ತದೆ.
- 10 ನೇ ತರಗತಿಯ ತೇರ್ಗಡೆಯಾಗಿರಬೇಕು ಮತ್ತು ಸ್ಥಳೀಯ ಬಾಷೆ ಓದಲು ಮತ್ತು ಬರೆಯಲು ಬಲ್ಲವರಾಗಿರಬೇಕು. ಮೂಲ ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು.
- ಸೈಕಲ್ ಓಡಿಸಲು ಬರಬೇಕು. ಹಾಗೂ ಅದಕ್ಕೆ ಬೇಕಾದ ಜ್ಞಾನವನ್ನು ಹೊಂದಿರಬೇಕು.
ಆಯ್ಕೆ ಪ್ರಕ್ರಿಯೆಯ ಮಾನದಂಡಗಳು
- 10 ನೇ ತರಗತಿಯಲ್ಲಿ ಪಡೆದುಕೊಂಡಿರುವ ಅಂಕಗಳ ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.
- ಯಾವುದೇ ರೀತಿಯ ಲಿಖಿತ ಪರೀಕ್ಷೆಗಳು ಇರುವುದಿಲ್ಲ, ಮತ್ತು ಇಂಟರ್ ವ್ಯೂವ್ ಗಳು ಇರುವುದಿಲ್ಲ.
- ಮೀಸಲಾತಿ ಮತ್ತು ವಯೋಮಿತಿ ಸಡಿಲಿಕೆ ನಿಯಮಾನುಸಾರ ಅನುಸರಿಸಲಾಗುತ್ತದೆ.
- ದಾಖಲಾತಿಗಳ ಪರಿಶೀಲನೆಯಲ್ಲಿ ತಮ್ಮ 10 ನೇ ತರಗತಿಯ ಅಂಕಪಟ್ಟಿಯನ್ನು ಹಾಗೂ ಸರ್ಕಾರದಿಂದ ನೀಡಲಾಗಿರುವ ಯಾವುದಾದರೂ ಒಂದು ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಹಾಜರುಪಡಿಸುವುದು.
- ಆರೋಗ್ಯವಂತ ದೇಹವನ್ನು ಹೊಂದಿರುವ ಕುರಿತಾದ ವೈದ್ಯಕೀಯ ಪ್ರಮಾಣ ಪತ್ರವನ್ನು ಹಾಜರುಪಡಿಸುವುದು.
ವೇತನ ಸೌಲಭ್ಯ
| ಬ್ರಾಂಚ್ ಪೋಸ್ಟ್ ಮಾಸ್ಟರ್ | 12,000-29,380 |
| ಅಸಿಸ್ಟಂಟ್ ಬ್ರಾಂಚ್ ಪೋಸ್ಟ್ ಮಾಸ್ಟರ್ | 10,000-24,470 |
| ಗ್ರಾಮೀಣ ಢಾಕ್ ಸೇವಕ | 10,000-24,470 |
ಕಳೆದ ಬಾರಿಯ ಪಲಿತಾಂಶವನ್ನು ಅವಲೋಕಿಸಿದಾಗ ತಿಳಿದ ವಿಚಾರವೆಂದರೆ, ನೀವು 10 ನೇ ತರಗತಿಯಲ್ಲಿ 90% ಗಿಂತ ಹೆಚ್ಚಿನಅಂಕಗಳನ್ನು ಗಳಿಸಿದ್ದರೆ ಮಾತ್ರ ಆಯ್ಕೆಯಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ ಎಂಬ ಕಹಿ ಸತ್ಯವನ್ನು ಮರೆಯಬೇಡಿ.
ಶೇ 80 ಕ್ಕಿಂತ ಕಡಿಮೆ ಫಲಿತಾಂಶವನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿ ಹಾಕಿ ಸಮಯ ವ್ಯರ್ಥ ಮಾಡಿಕೊಳ್ಳಬೇಡಿ.
ಅಧಿಸೂಚನೆ ಹೊರಡಿಸುವ ದಿನಾಂಕ: 28-01-2026.
ಆನ್ ಲೈನ್ ಮುಖಾಂತರ ನೋಂದಣಿ ಮಾಡಿಕೊಳ್ಳಲು ಪ್ರಾರಂಭದ ದಿನಾಂಕ 31-01-2026.
ಆನ್-ಲೈನ್ ಮುಖಾಂತರಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 05-02-2026.
ಸಲ್ಲಿಸಿದ ಅರ್ಜಿಯಲ್ಲಿ ಏನಾದರೂ ತಪ್ಪುಗಳಿದ್ದರೆ ಸರಿಪಡಿಸಿಕೊಳ್ಳಲು ನಿಗಧಿಪಡಿಸಿರುವ ದಿನಾಂಕ: 18-02-2026 ಮತ್ತು 19-02-2026.
ಆನ್-ಲೈನ್ ಮುಖಾಂತರಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ವಿವರಗಳಿಗಾಗಿ, ಈ ಕೆಳಕಾಣಿಸಿದ ವೆಬ್ ಸೈಟ್ ನ್ನು ಸಂಪರ್ಕಿಸಿ.